Saturday, October 3, 2015

ದೇವತೆಯೋ, ಮಾಯೆಯೊ!





ಆಕಸ್ಮಿಕವಾಗಿ ಕಂಡ ನಿನ್ನ ಕುಡಿನೋಟ,
ಕಂಡು ಕಾಣದಂತೆ ನಕ್ಕ ನಿನ್ನ ನಗು,

ಚಂದ್ರನ ಅಚ್ಚೆನಿಸುವ ನಿನ್ನ ಮುಖ,
ಹಿಂತಿರುಗಿ ನೋಡದೆ ಹೋದ ನೀನು,
ಕಂಡಿದ್ದು ಕನಸಲ್ಲೊ, ಇಲ್ಲ ನನಸಲ್ಲೋ!?
ನೀನು ನನ್ನ ಪಾಲಿನ ದೇವತೆಯೋ, ಇಲ್ಲ ಮಾಯೆಯೊ!?