ನಾನೊಬ್ಬ ಕಾರ್ಮಿಕ , ದಿನಗೂಲಿಯ ಕಾರ್ಮಿಕ . ಆ ದಿನದ ದಣಿವು, ಹಸಿವು, ನಿದ್ರೆ ತರುವ ಹುಮ್ಮಸ್ಸಿನ ಕಾರ್ಮಿಕ
ನಾನೊಬ್ಬ ಕಾರ್ಮಿಕ, ಹೊಲ ಉಳುವ ರೈತ. ಹದದ ಮಳೆ, ಬಿಸಿಲು, ಗಾಳಿ ನನ್ನ ಪಾಲಿನ ವರ. ನಾ ಭೂತಾಯಿಯ ಪ್ರೀತಿಯ ಕಾರ್ಮಿಕ .
ನಾನೊಬ್ಬ ಕಾರ್ಮಿಕ, ನಾನೊಬ್ಬ ಚಾಲಕ. ಚಲಿಸುವ ವಾಹನದಿಂದ ನನ್ನ ತುತ್ತಿನ ಉಗಮ, ಸ್ಥಗಿತ ಸಂಚಾರವ ಮೆಟ್ಟಿ ನಿಲ್ಲುವ ಕಾರ್ಮಿಕ .
ನಾನೊಬ್ಬ ಕಾರ್ಮಿಕ, ದುಡಿಮೆಯೇ ದೇವರೆಂದು ನಂಬಿದ, ಜೀವನ ಸುಧಾರಿಸುವ ಕಸುಬುಗುಳ ನಂಬಿರುವ, ತೆರಿಗೆ ಕಟ್ಟುವ ಕಾರ್ಮಿಕ .
ನಾನೊಬ್ಬ ಕಾರ್ಮಿಕ, ನಾನೊಬ್ಬ ರಾಜಕಾರಣಿ. ದೇಶದ ಪ್ರಗತಿಗಾಗಿ ದುಡಿವೆನೆಂದು ಪಣತೊಟ್ಟ ಕಾರ್ಮಿಕ .
ಕಾರ್ಮಿಕನ ಕಷ್ಟ ತನಗೆ ಬರದಿರಲೆಂದು, ಕಷ್ಟ ಪಟ್ಟು ಲಂಚ ದುಡಿವ ಕಾರ್ಮಿಕ.
ನೀತಿ ರಾಜಕಾರಣಿಗಳ ತುಳಿದುಹಾಕುವ ಕಾರ್ಮಿಕ.
ಆಷಾಢಭೂತಿ ಕಾರ್ಮಿಕ .
ನಂಬಿ. ನಾನು ನಿಮ್ಮ ಐದು ವರ್ಷದ ಕಾರ್ಮಿಕ !
ಕಾರ್ಮಿಕನ ಕಷ್ಟ ತನಗೆ ಬರದಿರಲೆಂದು, ಕಷ್ಟ ಪಟ್ಟು ಲಂಚ ದುಡಿವ ಕಾರ್ಮಿಕ.
ನೀತಿ ರಾಜಕಾರಣಿಗಳ ತುಳಿದುಹಾಕುವ ಕಾರ್ಮಿಕ.
ಆಷಾಢಭೂತಿ ಕಾರ್ಮಿಕ .
ನಂಬಿ. ನಾನು ನಿಮ್ಮ ಐದು ವರ್ಷದ ಕಾರ್ಮಿಕ !
No comments:
Post a Comment